ಮಗಳಿಗೆ ನಾಮಕರಣ ಮಾಡಿದ ನಟ ಅಜಯ್ ರಾವ್. ಏನು ಹೆಸರು?

ಅಜಯ್ ರಾವ್ ಮೊನ್ನೆಯಷ್ಟೇ ತಂದೆ ಆಗಿದ್ದರು. ಅಜಯ್ ಪತ್ನಿ ಸ್ವಪ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಜಯ್ ರಾವ್ ತಮ್ಮ ಮಗುವಿಗೆ ಇದೀಗ ನಾಮಕರಣ ಮಾಡಿದ್ದಾರೆ.

ಮುದ್ದಾದ ಮಗಳಿಗೆ “ಚೆರಿಶ್ಮ ಅಜಯ್ ರಾವ್” ಎಂದು ಹೆಸರಿಟ್ಟಿದ್ದಾರೆ. ಮಗಳಿನ ನಾಮಕರಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

2014ರ ಡಿಸೆಂಬರ್ 18 ರಂದು ಕೊಪ್ಪಳದ ದೇವಸ್ಥಾನದಲ್ಲಿ ಅಜಯ್ ಹಾಗೂ ಸ್ವಪ್ನ ದಂಪತಿಯ ವಿವಾಹ ನಡೆದಿತ್ತು. ಇವರಿಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ.ಸ್ವಪ್ನ ಕೂಡ ಅಜಯ್ ಅವರ ಹುಟ್ಟೂರಿನವರೇ ಆಗಿದ್ದಾರೆ.

You may also like...

Leave a Reply

Your email address will not be published. Required fields are marked *